ಭಾರತ-ಯುಕೆ ವ್ಯಾಪಾರ ಒಪ್ಪಂದದಿಂದ ಐಟಿ ವಲಯಕ್ಕೆ ಪ್ರೋತ್ಸಾಹ; ಕರ್ನಾಟಕದ ಐಟಿ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿ
![]() |
INDIA - UK |
ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಐಟಿ ಕ್ಷೇತ್ರಕ್ಕೆ ಪ್ರೋತ್ಸಾಹ ದೊರೆಯಲಿದ್ದು, ಕರ್ನಾಟಕದ ಐಟಿ ಕ್ಷೇತ್ರಕ್ಕೂ ಪೂರಕವಾಗಲಿದೆ. ಇದರಿಂದ ಐಟಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಈ ಕುರಿತು ಒಂದು ವರದಿ .. ಮುಕ್ತ ವ್ಯಾಪಾರ ಒಪ್ಪಂದದಿಂದ ಕರ್ನಾಟಕದ ಐಟಿ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿಯಾಗಲಿದೆ. ದರಗಳನ್ನು ಕಡಿಮೆಗೊಳಿಸುವ ಮೂಲಕ ರಫ್ತು ಹಾಗೂ ಹೂಡಿಕೆಯಲ್ಲಿ ಭರ್ಜರಿ ಏರಿಕೆಯನ್ನು ಉಂಟುಮಾಡಬಹುದು. ಇದರಿಂದ ಕರ್ನಾಟಕದ ಐಟಿ ಉತ್ಪನ್ನಗಳು ಮತ್ತು ಸೇವೆಗಳು ಯುಕೆ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ.. ಇದರ ಪರಿಣಾಮವಾಗಿ ಉತ್ಪಾದನಾ ವೆಚ್ಚಗಳು ಕಡಿಮೆಯಾಗುತ್ತವೆ ಹಾಗೂ ಕರ್ನಾಟಕದ ಐಟಿ ಉತ್ಪನ್ನಗಳು ಯುಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ ಈ FTA ಮೂಲಕ, ಕಾರ್ಖಾನೆಗಳಲ್ಲಿ ಬಳಸುವ ಎಲೆಕ್ಟ್ರಾನಿಕ್ ಬಿಡಿ ಭಾಗಗಳು ಮತ್ತು ಕಚ್ಚಾ ವಸ್ತುಗಳ ಮೇಲೆ ಇರುವ ತೆರಿಗೆಗಳು ಬಹುಪಾಲು ಇಲ್ಲವಾಗುತ್ತದೆ ಅಥವಾ ಶೂನ್ಯಕ್ಕೆ ಇಳಿಕೆಯಾಗುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಕೂಡ ಕಡಿಮೆಯಾಗಲಿದೆ. ಹಾಗಾಗಿ ಕರ್ನಾಟಕದಲ್ಲಿ ತಯಾರಾಗುವ ಐಟಿ ಉತ್ಪನ್ನಗಳಿಗೆ ಯುಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುತ್ತದೆ ಬೆಂಗಳೂರು ಐಟಿ ಕ್ಷೇತ್ರ ಜಗತ್ತಿನಲ್ಲೇ ಅತ್ಯಂತ ಉನ್ನತ ಸ್ಥಾನದಲ್ಲಿದೆ. ಈಗ ಈ ಮುಕ್ತ ವ್ಯಾಪಾರ ಒಪ್ಪಂದದಿಂದ ಅದಕ್ಕೆ ಮತ್ತಷ್ಟು ಪ್ರೋತ್ಸಾಹ ದೊರೆಯುವಾಗುತ್ತದೆ. ಭಾರತೀಯ ಸಮುದ್ರ ಉತ್ಪನ್ನಗಳಿಗೆ ಬಹು ಮುಖ್ಯವಾಗಿ ಸುಂಕವಿಲ್ಲ .ಯುಕೆ ಆಮದು ಮಾಡಿಕೊಳ್ಳುವ ಸಮುದ್ರೋತ್ಪನ್ನಗಳು 5.4 ಬಿಲಿಯನ್ ಡಾಲರ್ , ಅದರಲ್ಲಿ ಭಾರತದ ಪ್ರಸಕ್ತ ಪಾಲು ಶೇಕಡ 2.25ರಷ್ಟಿದೆ..ಯುಕೆಗೆ ಭಾರತ ರಫ್ತು ಮಾಡುವ ಸಮುದ್ರೋತ್ಪನ್ನಗಳು 104.43 ಯುಎಸ್ ಡಾಲರ್ ನಷ್ಟು. ಈಗ ಸಮುದ್ರೋತ್ಪನ್ನಗಳ ಮೇಲಿನ ಸುಂಕ ಶೂನ್ಯ. ಹೀಗಾಗಿ ಸಮುದ್ರೋತ್ಪನ್ನಗಳ ಪಾಲು ದುಪ್ಪಟ್ಟಾಗಲಿದ್ದು, ಎಲ್ಲಾ ಕರಾವಳಿ ರಾಜ್ಯಗಳಿಗೆ ಈ ಒಪ್ಪಂದದಿಂದ ಉಪಯೋಗವಾಗುವ ನಿರೀಕ್ಷೆಯಿದೆ.