ಆಪರೇಷನ್ ಸಿಂಧೂರ್ ಸ್ವಾವಲಂಬಿ ಭಾರತದ ಶಕ್ತಿ ಅನಾವರಣ
ಆಪರೇಷನ್ ಮಹಾದೇವ್’ ಮೂಲಕ ಪಹಲ್ಗಾಮ್ ದಾಳಿಕೋರರನ್ನು ಭದ್ರತಾ ಪಡೆಗಳು ಹತ್ಯೆ ಮಾಡುವ ಮೂಲಕ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಒದಗಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿಂದು ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಕುರಿತು ವಿಶೇಷ ರ‍್ಚೆಯಲ್ಲಿ ಪಾಲ್ಗೊಂಡು ಅವರು, ಆಪರೇಷನ್ ಸಿಂಧೂರ್ ಸ್ವಾವಲಂಬಿ ಭಾರತ ಶಕ್ತಿ ಅನಾವರಣ ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳ ಶರ‍್ಯ ಮತ್ತು ಶಕ್ತಿಯ ವಿಜಯೋತ್ಸವ ಎಂದು ತಿಳಿಸಿದ್ದಾರೆ. ತಾವು ಈ ಮೊದಲೇ ಹೇಳಿದಂತೆ ಭಾರತ ಬುದ್ಧನ ನಾಡು. ಹೀಗಾಗಿ ಯುದ್ಧವನ್ನು ಬಯಸುವುದಿಲ್ಲ. ಶಾಂತಿ, ಅಭಿವೃದ್ಧಿ ನಮ್ಮ ಆದ್ಯತೆ. ನಮ್ಮ ಪ್ರಗತಿ, ಶಾಂತಿಗೆ ಅಡ್ಡಿ ಬಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು. ಪಾಕಿಸ್ತಾನದ ಪರಮಾಣು ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ಜೊತೆಗೆ ಇಂತಹ ಬೆದರಿಕೆಗಳನ್ನು ಸಹಿಸುವುದಿಲ್ಲ . ಭಯೋತ್ಪಾದಕರು, ಅವರ ಪ್ರಾಯೋಜಕರು, ಭಯೋತ್ಪಾದಕ ಮಾಸ್ಟರ್ ಮೈಂಡ್ ಗಳಿಗೆ ಆಪರೇಷನ್ ಸಿಂಧೂರ್ ಮೂಲಕ ಸೂಕ್ತ ಉತ್ತರ ನೀಡಲಾಗಿದೆ ಎಂದರು. ಆಪರೇಷನ್ ಸಿಂಧೂರ್ ಕರ‍್ಯಾಚರಣೆ ಇನ್ನೂ ಮುಗಿದಿಲ್ಲ. ಭಾರತದ ಮೇಲೆ ದಾಳಿ ಮಾಡುವ ದುಸ್ಸಾಹಾಸಕ್ಕೆ ಪಾಕಿಸ್ತಾನ ಕೈ ಹಾಕಿದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು. ಪಹಲ್ಗಾಮ್ ನಲ್ಲಿ ಅಮಾಯಕರ ಹತ್ಯೆಯ ವಿಷಯವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಂಡಿದ್ದು, ಖಂಡನೀಯ. ಆಪರೇಷನ್ ಸಿಂಧೂರ್ ಗೆ ಜಾಗತಿಕ ಬೆಂಬಲ ಸಿಕ್ಕರೂ ಧರ‍್ಯಶಾಲಿ ಯೋಧರ ಶರ‍್ಯ, ಸಾಹಸಕ್ಕೆ ಕಾಂಗ್ರೆಸ್ ನಿಂದ ಬೆಂಬಲ ಸಿಗಲಿಲ್ಲ. ಭಾರತ ಎಲ್ಲ ವಲಯಗಳಲ್ಲಿ ಸ್ವಾವಲಂಬನೆಯತ್ತ ವೇಗವಾಗಿ ಮುನ್ನುಗ್ಗಿತ್ತಿದೆ. ಆದರೆ ಕಾಂಗ್ರೆಸ್ ಪಾಕಿಸ್ತಾನದ ಹಿಂದೆ ಬಿದ್ದು, ಸಮಸ್ಯೆಯನ್ನು ಆಹ್ವಾನಿಸಿಕೊಳ್ಳುತ್ತಿದೆ ಎಂದು ತಿಳಿಸಿದರು. ಮೇ ೯ರಂದು ಪಾಕಿಸ್ತಾನ , ಭಾರತದ ಮೇಲೆ ಒಂದು ಸಾವಿರಕ್ಕೂ ಅಧಿಕ ಕ್ಷಿಪಣಿಗಳು, ಡ್ರೋನ್ ಗಳ ದಾಳಿ ನಡೆಸಿತ್ತು. ಪಾಕಿಸ್ತಾನದ ಯೋಜನೆ ಬಗ್ಗೆ ಅರಿತಿದ್ದ ಸೇನಾಪಡೆಗಳು ಅವುಗಳನ್ನು ಆಕಾಶದಲ್ಲೇ ಹೊಡೆರುಳಿಸಿದೆ. ಭಾರತದ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಲಾಗಿದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಜಗತ್ತಿನ ಯಾವೊಬ್ಬ ನಾಯಕರು ಹೇಳಿರಲಿಲ್ಲ. ಮೇ ೯ರಂದು ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕರೆ ಮಾಡಿ, ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ ಸಾಧ್ಯತೆಯಿದೆ ಎನ್ನುವ ವಿಷಯ ತಿಳಿಸಿದ್ದರು. ಒಂದು ವೇಳೆ ಪಾಕಿಸ್ತಾನ ದಾಳಿ ಮಾಡಿದರೆ, ದೊಡ್ಡ ಬೆಲೆ ತರಬೇಕಾಗುತ್ತದೆ ಎಂದು ಅವರಿಗೆ ತಾವು ತಿಳಿಸಿದ್ದೆ ಎಂದು ಹೇಳಿದರು.