Monday, August 4, 2025

foxconn bangalore

 

1.                                                          1. ¥sÁPïìPÁ£ï£À ¨ÉAUÀ¼ÀÆgÀÄ

foxconn bangalore



   ¥sÁPïìPÁ£ï£À ¨ÉAUÀ¼ÀÆj£À°è ¸ÁܪÀgÀ dÆ£ï 2025 gÀ ªÉüÉUÉ L¥sÉÆÃ£ï ¸ÁUÀuÉAiÀÄ£ÀÄß ¥ÁægÀA©ü¸À°zÉ. zÉêÀ£ÀºÀ½î LnLDgï£À°ègÀĪÀ F ¸Ë®¨sÀåªÀÅ ªÁ¶ðPÀªÁV 20 «Ä°AiÀÄ£ï L¥sÉÆÃ£ïUÀ¼À£ÀÄß ¥ÀÆtð ¸ÁªÀÄxÀåðzÀ°è GvÁࢸÀĪÀ ¤jÃPÉë¬ÄzÉ.

       PÀ£ÁðlPÀzÀ ªÁtÂdå ªÀÄvÀÄÛ PÉÊUÁjPÁ ¸ÀaªÀ JA.©. ¥Ánïï, D¥À¯ï 2026 gÀ ªÉüÉUÉ J¯Áè AiÀÄÄJ¸ï-¨ËAqï L¥sÉÆÃ£ï C¸ÉA©èAiÀÄ£ÀÄß ¨sÁgÀvÀPÉÌ ¸ÀܼÁAvÀj¸À§ºÀÄzÀÄ (U.S.-bound iPhone assembly to India) JAzÀÄ zÀÈqsÀ¥Àr¹zÀgÀÄ,

        EzÀÄ eÁUÀwPÀ vÀAvÀæeÁÕ£À GvÁàzÀ£Á PÉÃAzÀæªÁV PÀ£ÁðlPÀzÀ ¸ÁÜ£ÀªÀ£ÀÄß §®¥Àr¸ÀÄvÀÛzÉ.

            ¥À¯ï ¹EM nªÀiï PÀÄPï CªÀgÀÄ dÆ£ï vÉæöʪÀiÁ¹PÀzÀ°è AiÀÄÄJ¸ï£À°è ªÀiÁgÁlªÁUÀĪÀ ºÉaÑ£À                     L¥sÉÆÃ£ïUÀ¼À£ÀÄß ¨sÁgÀvÀzÀ°è vÀAiÀiÁj¸À¯ÁUÀĪÀÅzÀÄ JAzÀÄ ºÉýzÁÝgÉ

Tuesday, July 29, 2025

ಆಪರೇಷನ್ ಸಿಂಧೂರ್ ಸ್ವಾವಲಂಬಿ ಭಾರತದ ಶಕ್ತಿ ಅನಾವರಣ(operation sindoor )

ಆಪರೇಷನ್ ಸಿಂಧೂರ್ ಸ್ವಾವಲಂಬಿ ಭಾರತದ ಶಕ್ತಿ ಅನಾವರಣ 

operation sindoor

operation sindoor 

 ಆಪರೇಷನ್ ಮಹಾದೇವ್’ ಮೂಲಕ ಪಹಲ್ಗಾಮ್ ದಾಳಿಕೋರರನ್ನು ಭದ್ರತಾ ಪಡೆಗಳು ಹತ್ಯೆ ಮಾಡುವ ಮೂಲಕ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಒದಗಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿಂದು ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಕುರಿತು ವಿಶೇಷ ರ‍್ಚೆಯಲ್ಲಿ ಪಾಲ್ಗೊಂಡು ಅವರು, ಆಪರೇಷನ್ ಸಿಂಧೂರ್ ಸ್ವಾವಲಂಬಿ ಭಾರತ ಶಕ್ತಿ ಅನಾವರಣ ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳ ಶರ‍್ಯ ಮತ್ತು ಶಕ್ತಿಯ ವಿಜಯೋತ್ಸವ ಎಂದು ತಿಳಿಸಿದ್ದಾರೆ. ತಾವು ಈ ಮೊದಲೇ ಹೇಳಿದಂತೆ ಭಾರತ ಬುದ್ಧನ ನಾಡು. ಹೀಗಾಗಿ ಯುದ್ಧವನ್ನು ಬಯಸುವುದಿಲ್ಲ. ಶಾಂತಿ, ಅಭಿವೃದ್ಧಿ ನಮ್ಮ ಆದ್ಯತೆ. ನಮ್ಮ ಪ್ರಗತಿ, ಶಾಂತಿಗೆ ಅಡ್ಡಿ ಬಂದವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು. ಪಾಕಿಸ್ತಾನದ ಪರಮಾಣು ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ಜೊತೆಗೆ ಇಂತಹ ಬೆದರಿಕೆಗಳನ್ನು ಸಹಿಸುವುದಿಲ್ಲ . ಭಯೋತ್ಪಾದಕರು, ಅವರ ಪ್ರಾಯೋಜಕರು, ಭಯೋತ್ಪಾದಕ ಮಾಸ್ಟರ್ ಮೈಂಡ್ ಗಳಿಗೆ ಆಪರೇಷನ್ ಸಿಂಧೂರ್ ಮೂಲಕ ಸೂಕ್ತ ಉತ್ತರ ನೀಡಲಾಗಿದೆ ಎಂದರು. ಆಪರೇಷನ್ ಸಿಂಧೂರ್ ಕರ‍್ಯಾಚರಣೆ ಇನ್ನೂ ಮುಗಿದಿಲ್ಲ. ಭಾರತದ ಮೇಲೆ ದಾಳಿ ಮಾಡುವ ದುಸ್ಸಾಹಾಸಕ್ಕೆ ಪಾಕಿಸ್ತಾನ ಕೈ ಹಾಕಿದರೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು. ಪಹಲ್ಗಾಮ್ ನಲ್ಲಿ ಅಮಾಯಕರ ಹತ್ಯೆಯ ವಿಷಯವನ್ನು ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಂಡಿದ್ದು, ಖಂಡನೀಯ. ಆಪರೇಷನ್ ಸಿಂಧೂರ್ ಗೆ ಜಾಗತಿಕ ಬೆಂಬಲ ಸಿಕ್ಕರೂ ಧರ‍್ಯಶಾಲಿ ಯೋಧರ ಶರ‍್ಯ, ಸಾಹಸಕ್ಕೆ ಕಾಂಗ್ರೆಸ್ ನಿಂದ ಬೆಂಬಲ ಸಿಗಲಿಲ್ಲ. ಭಾರತ ಎಲ್ಲ ವಲಯಗಳಲ್ಲಿ ಸ್ವಾವಲಂಬನೆಯತ್ತ ವೇಗವಾಗಿ ಮುನ್ನುಗ್ಗಿತ್ತಿದೆ. ಆದರೆ ಕಾಂಗ್ರೆಸ್ ಪಾಕಿಸ್ತಾನದ ಹಿಂದೆ ಬಿದ್ದು, ಸಮಸ್ಯೆಯನ್ನು ಆಹ್ವಾನಿಸಿಕೊಳ್ಳುತ್ತಿದೆ ಎಂದು ತಿಳಿಸಿದರು. ಮೇ ೯ರಂದು ಪಾಕಿಸ್ತಾನ , ಭಾರತದ ಮೇಲೆ ಒಂದು ಸಾವಿರಕ್ಕೂ ಅಧಿಕ ಕ್ಷಿಪಣಿಗಳು, ಡ್ರೋನ್ ಗಳ ದಾಳಿ ನಡೆಸಿತ್ತು. ಪಾಕಿಸ್ತಾನದ ಯೋಜನೆ ಬಗ್ಗೆ ಅರಿತಿದ್ದ ಸೇನಾಪಡೆಗಳು ಅವುಗಳನ್ನು ಆಕಾಶದಲ್ಲೇ ಹೊಡೆರುಳಿಸಿದೆ. ಭಾರತದ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಕಠಿಣ ಸಂದೇಶವನ್ನು ರವಾನಿಸಲಾಗಿದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ನಿಲ್ಲಿಸುವಂತೆ ಜಗತ್ತಿನ ಯಾವೊಬ್ಬ ನಾಯಕರು ಹೇಳಿರಲಿಲ್ಲ. ಮೇ ೯ರಂದು ಅಮೆರಿಕಾ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕರೆ ಮಾಡಿ, ಪಾಕಿಸ್ತಾನ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ ಸಾಧ್ಯತೆಯಿದೆ ಎನ್ನುವ ವಿಷಯ ತಿಳಿಸಿದ್ದರು. ಒಂದು ವೇಳೆ ಪಾಕಿಸ್ತಾನ ದಾಳಿ ಮಾಡಿದರೆ, ದೊಡ್ಡ ಬೆಲೆ ತರಬೇಕಾಗುತ್ತದೆ ಎಂದು ಅವರಿಗೆ ತಾವು ತಿಳಿಸಿದ್ದೆ ಎಂದು ಹೇಳಿದರು.

Sunday, July 27, 2025

ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನ್ಯಾನೋ ಯೂರಿಯಾ ಲಭ್ಯವಿದೆ.(A lot of nano urea is available in Vijayapura district.)

 

ವಿಜಯಪುರ  ಜಿಲ್ಲೆಯಲ್ಲಿ ಸಾಕಷ್ಟು ನ್ಯಾನೋ ಯೂರಿಯಾ ಲಭ್ಯವಿದೆ - ಜಂಟಿ ಕೃಷಿ ಉಪನಿರ್ದೇಶಕರು.




ವಿಜಯಪುರ  ಜಿಲ್ಲೆಯಲ್ಲಿ ಸಾಕಷ್ಟು ನ್ಯಾನೋ ಯೂರಿಯಾ ಲಭ್ಯವಿದ್ದು, ಯೂರಿಯಾ ಬದಲಾಗಿ ನ್ಯಾನೋ ಯೂರಿಯಾ ಬಳಕೆ ಮಾಡುವಂತೆ ಜಂಟಿ ಕೃಷಿ ಉಪನಿರ್ದೇಶಕರು ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಪ್ಲೆಕ್ಸ್ ರಸಗೊಬ್ಬರ ೧೫ ಸಾವಿರದ ೫೬೩ ಟನ್ ಲಭ್ಯವಿದ್ದು, ಈ ರಸಗೊಬ್ಬರವನ್ನು ರೈತರು ಬಳಕೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ೨೦೨೫ರ ಜುಲೈ ಅಂತ್ಯದವರೆಗೆ ಜಿಲ್ಲೆಗೆ ೨೪ ಸಾವಿರದ ೯೫೦ ಟನ್ ಯೂರಿಯಾ ರಸಗೊಬ್ಬರ  ಹಂಚಿಕೆಯಾಗಿದ್ದು, ಈವರೆಗೆ ೩೦ ಸಾವಿರದ ೮೭೦ ಟನ್ ಮಾರಾಟವಾಗಿ ೪ ಸಾವಿರದ ೮೪೨ ಟನ್ ಯೂರಿಯಾ ವಿವಿಧ ಮಾರಾಟಗಾರರಲ್ಲಿ ದಾಸ್ತಾನಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಭಾರತದ ರಸಗೊಬ್ಬರ ಕೊರತೆಯು ಒಂದು ಪ್ರಮುಖ ಕಳವಳವಾಗಿ ಹೊರಹೊಮ್ಮಿದ್ದು, ಕೃಷಿ ಉತ್ಪಾದಕತೆ ಮತ್ತು ವಿಶಾಲ ಆರ್ಥಿಕತೆ ಎರಡರ ಮೇಲೂ ಪರಿಣಾಮ ಬೀರುತ್ತದೆ. ದೇಶವು DAP ಮತ್ತು MOP ನಂತಹ ಪ್ರಮುಖ ರಸಗೊಬ್ಬರಗಳ ಆಮದಿನ ಮೇಲೆ ಹೆಚ್ಚು ಅವಲಂಬಿತವಾಗಿದೆ, ಇದು ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳಿಗೆ, ವಿಶೇಷವಾಗಿ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ರಫ್ತು ನಿರ್ಬಂಧಗಳಿಂದಾಗಿ ದುರ್ಬಲವಾಗುವಂತೆ ಮಾಡುತ್ತದೆ. ಹೆಚ್ಚಿದ ದೇಶೀಯ ಬೇಡಿಕೆ, ಪೂರೈಕೆಯಲ್ಲಿನ ವಿಳಂಬ ಮತ್ತು ಬೆಲೆ ಏರಿಕೆಯೊಂದಿಗೆ ಸೇರಿಕೊಂಡು ವ್ಯಾಪಕ ರೈತರ ಸಂಕಷ್ಟಕ್ಕೆ ಕಾರಣವಾಗಿದೆ ಮತ್ತು ಬೆಳೆ ಇಳುವರಿ ಕಡಿಮೆಯಾಗಿದೆ. ಸರ್ಕಾರದ ಮೇಲಿನ ಆರ್ಥಿಕ ಹೊರೆಯೂ ಹೆಚ್ಚಾಗಿದೆ, ರಸಗೊಬ್ಬರ ಸಬ್ಸಿಡಿಗಳು ₹1.79 ಲಕ್ಷ ಕೋಟಿ ಮೀರಿದೆ, ಹಣಕಾಸಿನ ಸಂಪನ್ಮೂಲಗಳನ್ನು ತಗ್ಗಿಸುತ್ತದೆ ಮತ್ತು ಹಣದುಬ್ಬರ ಮತ್ತು ವ್ಯಾಪಾರ ಅಸಮತೋಲನಕ್ಕೆ ಕಾರಣವಾಗಿದೆ. ಇದಲ್ಲದೆ, ಸಬ್ಸಿಡಿ ರಸಗೊಬ್ಬರಗಳ ಅತಿಯಾದ ಬಳಕೆಯು ಮಣ್ಣಿನ ಪೋಷಕಾಂಶಗಳ ಸವಕಳಿಗೆ ಕಾರಣವಾಗಿದೆ. ಈ ಸವಾಲುಗಳನ್ನು ಎದುರಿಸಲು, ಭಾರತವು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಬೇಕು, ಸಬ್ಸಿಡಿ ಕಾರ್ಯವಿಧಾನಗಳನ್ನು ಸುಧಾರಿಸಬೇಕು, ನ್ಯಾನೊ ಯೂರಿಯಾದಂತಹ ಪರ್ಯಾಯಗಳನ್ನು ಪ್ರೋತ್ಸಾಹಿಸಬೇಕು ಮತ್ತು ಸ್ಥಿತಿಸ್ಥಾಪಕ ಆಮದು ಪಾಲುದಾರಿಕೆಗಳನ್ನು ನಿರ್ಮಿಸಬೇಕು.

Saturday, July 26, 2025

ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ನಾಲ್ಕು ಆನೆಗಳನ್ನು ಜಪಾನ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ.(Four elephants have been successfully relocated to Japan from the Bannerghatta Biological Park.)

ಬನ್ನೇರುಘಟ್ಟ ಜೈವಿಕ ಉದ್ಯಾನವನ

ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವರ್ಗಾವಣೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ನಾಲ್ಕು ಆನೆಗಳನ್ನು ಜಪಾನ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ. ೮ ಘಂಟೆಗಳಿಗೂ ಹೆಚ್ಚು ಕಾಲ ಪ್ರಯಾಣದ ಬಳಿಕ ಅಲ್ಲಿ ಅವು, ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದೆ. ಸುರೇಶ್, ಗೌರಿ, ಶೃತಿ, ತುಳಸಿ ಎಂಬ ನಾಲ್ಕು ಆನೆಗಳನ್ನು ಜಪಾನ್‌ನ ಒಸಕಾದ ಕನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್ ಏರ್‌ವೇಸ್ ಸರಕು ವಿಮಾನದಲ್ಲಿ ಸಾಗಿಸಲಾಗಿತ್ತು. ಇಬ್ಬರು ಪಶುವೈದ್ಯಕೀಯ ಅಧಿಕಾರಿಗಳು, ನಾಲ್ವರು ಮಾವುತರು, ಮೇಲ್ವಿಚಾರಕರು ಹಾಗೂ ಜೀವ ಶಾಸ್ತ್ರಜ್ಞರನ್ನು ಒಳಗೊಂಡ ತಂಡವು ಆನೆಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸಹಾಯವಾಗುವಂತೆ ೧೫ ದಿನಗಳ ಕಾಲ ಜಪಾನ್‌ನಲ್ಲಿ ಉಳಿಯಲಿದೆ.

Bannerghatta Biological Park


ಬನ್ನೇರುಘಟ್ಟ ಜೈವಿಕ ಉದ್ಯಾನವನ ಕುರಿತು

ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park) ಬೆಂಗಳೂರು ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ, ಪ್ರಕೃತಿಯ ಮಡಿಲಲ್ಲಿ ನೆಲೆಗೊಂಡಿರುವ ಒಂದು ವಿಶಿಷ್ಟ ವನ್ಯಜೀವಿ ಸಂರಕ್ಷಣಾ ಕೇಂದ್ರವಾಗಿದೆ. ಇದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಅವಿಭಾಜ್ಯ ಅಂಗವಾಗಿದ್ದು, 2002ರಲ್ಲಿ ಸ್ವತಂತ್ರವಾಗಿ ಸ್ಥಾಪಿತವಾಯಿತು.

  • ವಿಸ್ತೀರ್ಣ: ಸುಮಾರು 731.88 ಹೆಕ್ಟೇರ್ ಪ್ರದೇಶದಲ್ಲಿ ಹರಡಿದೆ.

  • ಘಟಕಗಳು:

    • ಮೃಗಾಲಯ (Zoo)

    • ಸಫಾರಿ (Lion, Tiger, Bear, Herbivore)

    • ಚಿಟ್ಟೆ ಉದ್ಯಾನ (Butterfly Park)

    • ಪುನರ್ವಸತಿ ಮತ್ತು ಪಾರುಗಾಣಿಕಾ ಕೇಂದ್ರ (Rescue & Rehabilitation Centre).

  • ಪ್ರವಾಸಿಗರು ಸುರಕ್ಷಿತ ವಾಹನಗಳಲ್ಲಿ ಹುಲಿ, ಸಿಂಹ, ಕರಡಿ ಮತ್ತು ಸಸ್ಯಾಹಾರಿ ಪ್ರಾಣಿಗಳನ್ನು ನೈಸರ್ಗಿಕ ಪರಿಸರದಲ್ಲಿ ವೀಕ್ಷಿಸಬಹುದು.

  • ಸಫಾರಿ ಮಾರ್ಗವು ಹಸಿರು ಕಾಡು, ಗುಡ್ಡಗಳು ಮತ್ತು ಕಣಿವೆಗಳ ಮೂಲಕ ಸಾಗುತ್ತದೆ, ಇದು ನೈಸರ್ಗಿಕ ದೃಶ್ಯಾವಳಿಗೆ ಸಾಕ್ಷಿಯಾಗುತ್ತದೆ.

  • 2006ರಲ್ಲಿ ಸ್ಥಾಪಿತವಾದ ಈ ಉದ್ಯಾನವು ಭಾರತದ ಮೊದಲ ಚಿಟ್ಟೆ ಸಂರಕ್ಷಣಾಲಯವಾಗಿದೆ.

  • 20ಕ್ಕೂ ಹೆಚ್ಚು ಜಾತಿಯ ಚಿಟ್ಟೆಗಳಿಗೆ ಅನುಕೂಲಕರವಾದ ಪರಿಸರವನ್ನು ಇಲ್ಲಿ ನಿರ್ಮಿಸಲಾಗಿದೆ.

  • ವಿದ್ಯಾರ್ಥಿಗಳಿಗೆ ಪರಿಸರ ಶಿಕ್ಷಣ ನೀಡುವ ಚಿನ್ನರ ಮೃಗಾಲಯ ದರ್ಶನ ಕಾರ್ಯಕ್ರಮ.

  • ವೈಜ್ಞಾನಿಕ ಅಧ್ಯಯನ, ಪ್ರಾಣಿಗಳ ಆರೋಗ್ಯ ನಿರ್ವಹಣೆ ಮತ್ತು ಸಂರಕ್ಷಣಾ ಕಾರ್ಯಗಳಲ್ಲಿ ತೊಡಗಿರುವ ಸಂಸ್ಥೆಗಳ ಸಹಕಾರ.

ಭಾರತ-ಯುಕೆ ವ್ಯಾಪಾರ ಒಪ್ಪಂದದಿಂದ ಐಟಿ ವಲಯಕ್ಕೆ ಪ್ರೋತ್ಸಾಹ; ಕರ್ನಾಟಕದ ಐಟಿ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿ (India-UK trade deal boosts IT sector; further revolution in Karnataka's IT sector)

ಭಾರತ-ಯುಕೆ ವ್ಯಾಪಾರ ಒಪ್ಪಂದದಿಂದ ಐಟಿ ವಲಯಕ್ಕೆ ಪ್ರೋತ್ಸಾಹ; ಕರ್ನಾಟಕದ ಐಟಿ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿ 

india - uk
INDIA - UK


ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತದ ಐಟಿ ಕ್ಷೇತ್ರಕ್ಕೆ ಪ್ರೋತ್ಸಾಹ ದೊರೆಯಲಿದ್ದು, ಕರ್ನಾಟಕದ ಐಟಿ ಕ್ಷೇತ್ರಕ್ಕೂ ಪೂರಕವಾಗಲಿದೆ. ಇದರಿಂದ ಐಟಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಈ ಕುರಿತು ಒಂದು ವರದಿ .. ಮುಕ್ತ ವ್ಯಾಪಾರ ಒಪ್ಪಂದದಿಂದ ಕರ್ನಾಟಕದ ಐಟಿ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿಯಾಗಲಿದೆ. ದರಗಳನ್ನು ಕಡಿಮೆಗೊಳಿಸುವ ಮೂಲಕ ರಫ್ತು ಹಾಗೂ ಹೂಡಿಕೆಯಲ್ಲಿ ಭರ್ಜರಿ ಏರಿಕೆಯನ್ನು ಉಂಟುಮಾಡಬಹುದು. ಇದರಿಂದ ಕರ್ನಾಟಕದ ಐಟಿ ಉತ್ಪನ್ನಗಳು ಮತ್ತು ಸೇವೆಗಳು ಯುಕೆ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ.. ಇದರ ಪರಿಣಾಮವಾಗಿ ಉತ್ಪಾದನಾ ವೆಚ್ಚಗಳು ಕಡಿಮೆಯಾಗುತ್ತವೆ ಹಾಗೂ ಕರ್ನಾಟಕದ ಐಟಿ ಉತ್ಪನ್ನಗಳು ಯುಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟವಾಗುತ್ತವೆ ಈ FTA ಮೂಲಕ, ಕಾರ್ಖಾನೆಗಳಲ್ಲಿ ಬಳಸುವ ಎಲೆಕ್ಟ್ರಾನಿಕ್ ಬಿಡಿ ಭಾಗಗಳು ಮತ್ತು ಕಚ್ಚಾ ವಸ್ತುಗಳ ಮೇಲೆ ಇರುವ ತೆರಿಗೆಗಳು ಬಹುಪಾಲು ಇಲ್ಲವಾಗುತ್ತದೆ ಅಥವಾ ಶೂನ್ಯಕ್ಕೆ ಇಳಿಕೆಯಾಗುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಕೂಡ ಕಡಿಮೆಯಾಗಲಿದೆ. ಹಾಗಾಗಿ ಕರ್ನಾಟಕದಲ್ಲಿ ತಯಾರಾಗುವ ಐಟಿ ಉತ್ಪನ್ನಗಳಿಗೆ ಯುಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುತ್ತದೆ ಬೆಂಗಳೂರು ಐಟಿ ಕ್ಷೇತ್ರ ಜಗತ್ತಿನಲ್ಲೇ ಅತ್ಯಂತ ಉನ್ನತ ಸ್ಥಾನದಲ್ಲಿದೆ. ಈಗ ಈ ಮುಕ್ತ ವ್ಯಾಪಾರ ಒಪ್ಪಂದದಿಂದ ಅದಕ್ಕೆ ಮತ್ತಷ್ಟು ಪ್ರೋತ್ಸಾಹ ದೊರೆಯುವಾಗುತ್ತದೆ. ಭಾರತೀಯ ಸಮುದ್ರ ಉತ್ಪನ್ನಗಳಿಗೆ ಬಹು ಮುಖ್ಯವಾಗಿ ಸುಂಕವಿಲ್ಲ .ಯುಕೆ ಆಮದು ಮಾಡಿಕೊಳ್ಳುವ ಸಮುದ್ರೋತ್ಪನ್ನಗಳು 5.4 ಬಿಲಿಯನ್ ಡಾಲರ್ , ಅದರಲ್ಲಿ ಭಾರತದ ಪ್ರಸಕ್ತ ಪಾಲು ಶೇಕಡ 2.25ರಷ್ಟಿದೆ..ಯುಕೆಗೆ ಭಾರತ ರಫ್ತು ಮಾಡುವ ಸಮುದ್ರೋತ್ಪನ್ನಗಳು 104.43 ಯುಎಸ್ ಡಾಲರ್ ನಷ್ಟು. ಈಗ ಸಮುದ್ರೋತ್ಪನ್ನಗಳ ಮೇಲಿನ ಸುಂಕ ಶೂನ್ಯ. ಹೀಗಾಗಿ ಸಮುದ್ರೋತ್ಪನ್ನಗಳ ಪಾಲು ದುಪ್ಪಟ್ಟಾಗಲಿದ್ದು, ಎಲ್ಲಾ ಕರಾವಳಿ ರಾಜ್ಯಗಳಿಗೆ ಈ ಒಪ್ಪಂದದಿಂದ ಉಪಯೋಗವಾಗುವ ನಿರೀಕ್ಷೆಯಿದೆ.